ಸತ್ಯಮೇವ ಜಯತೆ (सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ) ಇದು ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ. ಭಾರತ ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯವನ್ನಾಗಿ ಅಳವಡಿಸಿಕೊಂಡಿತು.. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೆ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ. ಭಾರತದ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಸಮೀಪದ ಸಾರಾನಾಥದಲ್ಲಿ ಕ್ರಿ.ಪೂ. ೨೫೦ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ. == ಮೂಲ == ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ. ಸಂಸ್ಕೃತ ದೇವನಾಗರಿ ಲಿಪಿಯಲ್ಲಿ ಕನ್ನಡದಲ್ಲಿ ಅರ್ಥ ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವೀಯರು ಜನಪ್ರಿಯಗೊಳಿಸಿದರು . == ಉಲ್ಲೇಖಗಳು ==